How dangerous is the Praying Mantis?: 10 ಪಟ್ಟು ಹೆಚ್ಚು ಬಲಶಾಲಿಗಳನ್ನೂ ಹಿಡಿದು ಜೀವಂತವಾಗಿ ಕಿತ್ತು ತಿನ್ನುವ ಅಪರೂಪದ ಬೇಟೆಗಾರ

How dangerous is the Praying Mantis?

Praying Mantis or Killer Mantis: ಇಂದು ನಮ್ಮ ಜಗತ್ತು ಇಷ್ಟೊಂದು busy ಆಗಿರಲು ಹಲವು ಕಾರಣಗಳಲ್ಲಿ ಬಹು ಮುಖ್ಯವಾದ ಕಾರಣವೆಂದರೆ ಅದು ಹಸಿವು ಅನ್ನುವುದನ್ನ ನಾವೆಲ್ಲರೂ ಖಂಡಿತವಾಗಲೂ ಒಪ್ಪಿಕೊಳ್ಳಲೆ ಬೇಕಾದ ಒಂದು ವಿಚಾರ. ತನ್ನ ಮತ್ತು ತನ್ನನ್ನ ನಂಬಿರುವ ಕುಟುಂಬಸ್ಥರ ಹೊಟ್ಟೆ ತುಂಬಿಸುವ ಸಲುವಾಗಿ ನಾನಾ ರೀತಿಯ ಹೋರಾಟಗಳನ್ನ ನಡೆಸುತ್ತಿರುವುದು ಕೇವಲ ಮಾನವರೀಗಷ್ಟೇ ಸೀಮಿತವಾಗಿರದೆ ಪ್ರಾಣಿಗಳು, ಪಕ್ಷಿಗಳು, ಕ್ರಿಮಿ ಕೀಟಗಳು ನೀರಿನಲ್ಲಿ ಬದುಕುವ ಜಲಚರ ಜೀವಿಗಳು, ಈ ರೀತಿಯಾಗಿ ಈ ಜಗತ್ತಿನಲ್ಲಿ ವಾಸಿಸುವ ಪ್ರತಿ ಒಂದೊಂದು ಜೀವಿಗಳು ನಾನಾ ರೀತಿಯ ಹಲವಾರು ತಂತ್ರಗಳನ್ನ ಬಳಸಿಕೊಂಡು ತಮ್ಮ ತಮ್ಮ ಹಸಿವುಗಳನ್ನ ನೀಗಿಸಿಕೊಳ್ಳಲು ಹೋರಾಟಗಳನ್ನ ನಡೆಸುತ್ತಿರುವುದು ತಮಗೆಲ್ಲರಿಗೂ ತಿಳಿದಿರುವ ವಿಚಾರಗಳೇ.

 

 

ಆದರೆ  ನಮ್ಮಲ್ಲಿ ಬಹುತೇಕರಿಗೆ ತಿಳಿದಿರದ ಬೇಟೆಗಾರರಿಗೆಲ್ಲ ಅರಸ ಅನ್ನಬಹುದಾದ ಒಂದು ಸಣ್ಣಜೀವಿ Praying Mantis or Killer Mantis ಅಥವಾ ಪ್ರಾರ್ಥನಾ ಮಿಡತೆ ಅಥವಾ ಸೂರ್ಯನ ಕುದುರೆ ಅನ್ನುವ ಆಕ್ರಮಣಕಾರಿ ವಿಚಿತ್ರ ಬೇಟೆಗಾರನ ಕುರಿತಾಗಿ ತಿಳಿಸಿಕೊಡುವ ಸಣ್ಣ ಪ್ರಯತ್ನ.

Praying Mantis ಅನ್ನುವ ಮಿಡತೆ ಬೇಟೆ ಹೇಗಿರುತ್ತೆ ?

ಕಾಡಿನಲ್ಲಿ ಬದುಕುವ ಸಿಂಹಗಳು , ಹುಲಿ, ಚಿರತೆ, ಹೈನಾ, ತೋಳಗಳು ಅದ್ಹೇಗೆ ಬಲಹೀನ ಪ್ರಾಣಿಗಳನ್ನ ಗುರಿಯಾಗಿಸಿ ಬೇಟೆಯಾಡಿ ಮೆರೆಯುತ್ತಾ ಅವುಗಳನ್ನ ತಿಂದು ತಮ್ಮ ತಮ್ಮ ಹೊಟ್ಟೆಗಳನ್ನ ತುಂಬಿಸಿಕೊಂಡು ಮುಂದಕ್ಕೆ ಸಾಗುತ್ತಿರುವ ಜೀವಿಗಳೆಲ್ಲಾ ಒಂದು ಕಡೆಯಾದರೆ ಕೇವಲ ಎರಡೇ ಎರಡು ಇಂಚಿನಷ್ಟು ಉದ್ದವಿದ್ದು ಕೇವಲ ನಾಲಕ್ಕೆ 4 ಗ್ರಾಂ ಗಳಷ್ಟು ತೂಕವನ್ನ ಹೊಂದಿ ನೋಡುವುದಕ್ಕೆ ಸುಂದರವಾಗಿಯೂ ಕ್ಯೂಟ್ ಆಗಿಯೂ ಅತ್ಯಂತ ಅಮಾಯಕ ಜೀವಿಯಂತೆ ಕಾಣಿಸುವ ಶಿವನ ಕುದುರೆ ಅಂತಲೂ ಕರೆಯಲ್ಪಡುವ ಈ ಮಿಡತಯು ನಮ್ಮ ಕಣ್ಣಿಗೆ ಕಾಣಿಸುವಷ್ಟು, ನಾವು ಅಂದುಕೊಳ್ಳುವಷ್ಟು ಅಮಾಯಕ ಜೀವಿಯಂತೂ ಖಂಡಿತವಾಗಿಯೂ ಆಗಿರುವುದಿಲ್ಲ.

ಬದಲಾಗಿ ಬೇಟೆಯಾಡುವುದರಲ್ಲಿ ಅತ್ಯಂತ ಕರಾರುವಕ್ಕಾಗಿರುವ, ಡೇಂಜರಸ್,deadliest ಬೇಟೆಗಾರ ಇದಾಗಿದ್ದು ತನಗಿಂತಲೂ ತೂಕದಲ್ಲೂ, ಗಾತ್ರದಲ್ಲೂ, ಬಲದಲ್ಲೂ, 10 ಪಟ್ಟು ಹೆಚ್ಚಾಗಿರುವ ಜೀವಿಗಳನ್ನೇ ಧೈರ್ಯವಾಗಿ ಎದುರುಹಾಕಿಕೊಂಡು ಕ್ಷಣ ಮಾತ್ರಗಳಲ್ಲಿ ಅವುಗಳನ್ನ ತನ್ನ ಕಾಲುಗಳಲ್ಲಿರುವ ಚೂಪಾದ ಮುಳ್ಳುಗಳಿಂದ ಲಾಕ್ ಮಾಡಿ ಜೀವಂತವಾಗಿ ಒದ್ದಾಟನಡೆಸುತ್ತಿರುವಾಗಲೇ ಇದು ತನ್ನ ಪಾಡಿಗೆ ಶಾಂತವಾಗಿ ಕೂಲ್ ಆಗಿ ತಿಂದು ಮುಗಿಸುವಷ್ಟು dangeruos ಕೀಟವಾಗಿರುತ್ತದೆ. ಅಷ್ಟೇ ಅಲ್ಲದೆ ತಾನು ಗುರಿಯಿಟ್ಟ ಬೇಟೆಗಳನ್ನಷ್ಟೇ ಬಲಿ ಪಡೆದು ಹೊಟ್ಟೆ ತುಂಬಿಸಿ ಕೊಳ್ಳುವುದಲ್ಲದೆ ತನಗಿಂತ ಬಲಶಾಲಿ ಜೀವಿಗಳು ತನ್ನನೇ ಬೇಟೆಯಾಡಲು ಬಂದಾಗಲೂ ತನ್ನನ್ನ ಬೇಟೆಯಾಡಲು ಬಂದ ಬಲಶಾಲಿ ಜೀವಿಗಳನ್ನೇ ಬೇಟೆಯಾಡಿ ತಿಂದು ಮುಗಿಸುವಷ್ಟು ಚಾಣಾಕ್ಷ ಬೇಟೆಗಾರನಾಗಿರುತ್ತದೆ ಪ್ರಾರ್ಥನಾ ಮಿಡತೆ ಅನ್ನಲಾಗುವ ಈ ಕೀಟ.

 

ಈ ಮಿಡತೆಗೆ Praying Mantis ಅನ್ನುವ ಹೆಸರು ಬರಲು ಕಾರಣ

ಈ ಮಿಡತೆಗೆ ಆರು ಕಾಲುಗಳಿದ್ದು ಮುಂಭಾಗದಲ್ಲಿರುವ ಎರಡೂ ಕಾಲುಗಳು ಪ್ರಾರ್ಥನೆಯಲ್ಲಿ ತೋಡಗಿರುವಂತಹಾ ಅಥವಾ ನಮಸ್ಕಾರ ಮಾಡುವಂತಹಾ ಬಂಗಿಯಲ್ಲಿ ಸದಾ ಕಾಲ ಕಂಡು ಬರುವುದರಿಂದಲೇ ಪ್ರಾರ್ಥನಾ ಮಿಡತೆ ಅಥವಾ praying ಮ್ಯಾಂಟಿಸ್ ಅನ್ನುವ ಹೆಸರು ಬರಲು ಮುಖ್ಯ ಕಾರಣವಾಗಿರುತ್ತದೆ. ಅಲ್ಲದೆ ಜಗತ್ತಿನ ತುಂಬಾ 2400 ಬಗೆಗಳಷ್ಟು ನಾನಾ ಜಾತಿಗಳ ಮಿಡತೆಗಳಿದ್ದು ಇದರ 114 ಬಗೆಯ ಮಿಡತೆಗಳು ನಮ್ಮ ಭಾರತದಲ್ಲಿ ಇದೇ ಅನ್ನಲಾಗುತ್ತದೆ. ಅವುಗಳು ವಾಸಿಸುವ ಪ್ರದೇಶಗಳ ಮರಗಿಡಗಳ ಎಲೆಗಳ ಬಣ್ಣಗಳಿಗೆ ಅನುಗುಣವಾಗಿ
ಕಂದು ಬಣ್ಣ, ಬೂದಿ ಬಣ್ಣ, ಹಸಿರು ಬಣ್ಣ, ಹಳದಿ ಬಣ್ಣ, ಕಪ್ಪು ಬಣ್ಣ ಹಾಗೂ ಬಿಳಿ ಬಣ್ಣಗಳಲ್ಲೂ ಕಾಣ ಸಿಗುವ ಈ ಜೀವಿಗಳಿಗೆ ಬರೋಬ್ಬರಿ 5 ಕಣ್ಣುಗಳನ್ನ ಹೊಂದಿದ್ದು 180 ಡಿಗ್ರಿಗಳಷ್ಟು ತನ್ನ ಕತ್ತನ್ನ ತಿರುಗಿಸಿಕೊಳ್ಳುವ ಸಾಮರ್ಥ್ಯವನ್ನ ಹೊಂದಿರುತ್ತದೆ.

 

ಗಂಡು ಮಿಡತೆಯ ದಾರುಣವಾಗಿ ಕೊಂದು ಹೊಟ್ಟೆ ತುಂಬಿಸುವ ಹೆಣ್ಣು ಮ್ಯಾಂಟಿಸ್ /ಮಿಡತೆ

 

ಅಲ್ಲದೆ ಹೆಚ್ಚಾಗಿ ಒಂಟಿಯಾಗಿಯೇ ಕಾಣಸಿಗುವ ಈ ಕೀಟಗಳು ಜೋಡಿಯಾಗಿ ಕಾಣಲು ಸಿಗುತ್ತದೆ ಅನ್ನುವುದಾದರೆ ಆ ಜೋಡಿಯಲ್ಲಿ ಒಂದು ಮಿಡತೆಯು ಇನ್ನೇನು ದಾರುಣವಾಗಿ ಸಾಯಲಿದೆ ಅನ್ನುವ ಅರ್ಥದಲ್ಲಾಗಿರುತ್ತದೆ. ಹೌದು, ಈ ಜೀವಿಗಳ ಜೀವನ ಚಕ್ರದ ನಿಯಮದಲ್ಲಿ ಜೋಡಿಯೊಂದು ಹತ್ತಿರವಾಗಿ ಜನನ ಕ್ರಿಯೆಯಲ್ಲಿ ಸೇರಿಕೊಂಡು ತಮ್ಮ ಕೆಲಸವೂ ಪೂರ್ತಿಯಾಗಿ ಮುಗಿಸುವುದಕ್ಕಿಂತ ಮುಂಚೆಯೇ ವಿಚಿತ್ರವಾಗಿ ಯಾವುದೇ ದಯ ದಾಕ್ಷಿಣೆ ತೋರದೆ ತನ್ನ ಜೊತೆಗಾರ ಗಂಡು ಮಿಡತೆಯ ತಲೆಯನ್ನ ತಿನ್ನಲು ಶುರುಮಾಡಿ ಅತ್ಯಂತ ದಾರುಣವಾಗಿ ಕೊಂದು ಹೊಟ್ಟೆ ತುಂಬಿಸಿಕೊಂಡು ತಾನು ಮೊಟ್ಟೆ ಇಡುವ ಕಾರ್ಯದ ಕಡೆಗೆ ಮುಂದಕ್ಕೆ ಸಾಗಿ ಬಿಡುವುದಾಗಿರುತ್ತದೆ ಈ ಮ್ಯಾಂಟಿಸ್ ಮಿಡತೆ.

 

ಇನ್ನು ಈ ಜಗತ್ತಿನಲ್ಲಿನ ಕ್ರಿಮಿ ಕೀಟಗಳನ್ನೆಲ್ಲಾ ಸದಾ ಕಾಲ ಮನುಷ್ಯರಾದ ನಾವೆಲ್ಲರೂ ಒಂತರ ಮತ್ಸರವಾಗಿ ನೋಡುತ್ತಿರುವುದು ಸತ್ಯವಾದರೆ
ಈ ಜಗತ್ತಿನಲ್ಲಿ ಕ್ರಿಮಿ ಕೀಟಗಳಿಲ್ಲದೆ ಮಾನವನಿಗೆ ಬದುಕುವುದೇ ಅಸಾಧ್ಯ ಅನ್ನುವುದು ಕೂಡ ಅಷ್ಟೇ ಸತ್ಯವಾಗಿರುತ್ತದೆ.
ಈ ಜಗತ್ತಿನಲ್ಲಿ ವಾಸಿಸುವ ಒಂದೊಂದು ಜೀವಿಗಳಿಗೂ ಅದರದೇ ಆದ ಕರ್ತವ್ಯಗಳನ್ನ ನಮ್ಮ ಪರಿಸರವೇ ಎಲ್ಲಾ ಜೀವಿಗಳಿಗೆ ಕೊಟ್ಟು ಬಿಟ್ಟಿದ್ದು ಎಲ್ಲವೂ ಅದರದರ ಕರ್ತವ್ಯಗಳನ್ನ ಮಾಡಿಕೊಳ್ಳುತ್ತಾ ತಮ್ಮ ಜೀವನದ ಚಕ್ರವವನ್ನ ಮುಗಿಸಿ ಬಿಡುವುದಾಗಿರುತ್ತದೆ.

 

ಈ interesting Praying Mantis or Killer Mantis ವಿಡಿಯೋ ನೋಡಲು

 

Do Follow

https://www.facebook.com/Vicharavani

https://x.com/Vicharavani

 

2 thoughts on “How dangerous is the Praying Mantis?: 10 ಪಟ್ಟು ಹೆಚ್ಚು ಬಲಶಾಲಿಗಳನ್ನೂ ಹಿಡಿದು ಜೀವಂತವಾಗಿ ಕಿತ್ತು ತಿನ್ನುವ ಅಪರೂಪದ ಬೇಟೆಗಾರ

Leave a Reply

Your email address will not be published. Required fields are marked *