Healthy drinks after heavy meals: ಭಾರಿ ಊಟದ ನಂತರ ಸೇವಿಸಬಹುದಾದ Powerful natural ಪಾನೀಯಗಳು

Healthy drinks after heavy meals

ಬಿರಿಯಾನಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?, ಚಿಕನ್, ಮಟನ್, ಹಾಗೂ ಫಿಶ್ ನಿಂದ ತಯಾರಿಸುವ ಬಿರಿಯಾನಿಯೆಂದರೆ ಅನೇಕರ ನೆಚ್ಚಿನ ಖಾದ್ಯಗಳಲ್ಲಿ ಒಂದಾಗಿದೆ. ರುಚಿಯಾದ ಮಸಾಲೆಗಳಿಂದ ತಯಾರಿಸುವ ಬಿರಿಯಾನಿಯನ್ನು ಸಾಮಾನ್ಯವಾಗಿ ಮದುವೆ, ಫ್ಯಾಮಿಲಿ gatherings, ಹಬ್ಬದ ಆಚರಣೆ ಸಂದರ್ಭಗಳಲ್ಲಿ ಹಾಗೂ ರೆಸ್ಟೋರೆಂಟ್ಗಳಲ್ಲಿ ಬಡಿಸಲಾಗುತ್ತದೆ. ಹೀಗೆ ಬಿರಿಯಾನಿಯನ್ನು ತುಂಬಾ ಇಷ್ಟಪಟ್ಟು ತಿನ್ನುವ ಜನರು ಸೇವಿಸಿದ ನಂತರ ಜೀರ್ಣಕ್ರಿಯೆಯಾಗಲೆಂದು ತಂಪು ಪಾನೀಯವನ್ನು ಸೇವಿಸುವುದು ಅಭ್ಯಾಸ ಮಾಡಿಕೊಳ್ಳುತ್ತಾರೆ.

ಭಾರೀ ಊಟದ ನಂತರದ ಪಾನೀಯಗಳನ್ನು ಸೇವಿಸುವುದು ಪ್ರಾಚೀನ ಸಂಸ್ಕೃತಿಗಳ ಒಡನಾಟದಿಂದ ಬಂದಿದೆ. ಶತಮಾನಗಳ ಹಿಂದೆ ಊಟದ ನಂತರ ಪಾನೀಯಗಳನ್ನು ಕುಡಿಯುವ ಪದ್ಧತಿ ರೂಪುಗೊಂಡು, ಪ್ರಪಂಚದ ಹಲವು ಸಂಸ್ಕೃತಿಗಳಲ್ಲಿ ಬೆಳೆಯಿತು. ಪ್ರಾಚೀನ ಕಾಲದಲ್ಲಿ, ವಿವಿಧ ನಾಗರಿಕತೆಗಳು ಜೀರ್ಣಕ್ರಿಯೆ ಹಾಗೂ ಆರೋಗ್ಯಕ್ಕಾಗಿ ಪಾನೀಯಗಳ ಮಹತ್ವವನ್ನು ಅರಿತುಕೊಂಡು ಅದನ್ನು ಸೇವಿಸುತ್ತಿದ್ದರು. ಉದಾಹರಣೆಗೆ, ಪ್ರಾಚೀನ ರೋಮ್‌ನಲ್ಲಿ ಶ್ರೀಮಂತರು ಜೀರ್ಣಕ್ರಿಯೆಗೆ ಸಹಾಯ ಮಾಡಲು ಹಾಗೂ ದೇಹವನ್ನು ಶುದ್ಧೀಕರಿಸಲು ವೈನ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯುತ್ತಿದ್ದರೆ, ಪೂರ್ವ ದೇಶಗಳಾದ ಚೀನಾ ಹಾಗೂ ಭಾರತದವು ಚಹಾ ಮತ್ತು ಹುದುಗಿಸಿದ (fermented) ಪಾನೀಯಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಎಂದು ನಂಬಿದ್ದರು. ಈ ಪದ್ಧತಿ ಹಳೆಯ ಕಾಲದಿಂದ ಇಂದಿನ ತಲೆಮಾರುಗಳಿಗೆ ಸಾಗಿದೆ.

ಆದರೆ ಈಗಿನ ಕಾಲದಲ್ಲಿ ಜನರು ಕಾರ್ಬೊನೇಟೆಡ್ ಪಾನೀಯಗಳಾದ ಕೋಕಾ-ಕೋಲಾ, ಥಂಬ್ಸ್ ಅಪ್, ಸ್ಪ್ರೈಟ್ ನಂತಹ ಕೂಲ್ ಡ್ರಿಂಕ್ಗಳನ್ನು ಸೇವಿಸುತ್ತಾರೆ. ಇವುಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಎಂದು ನಂಬುತ್ತಾರೆ.
ಆದರೆ, ತಜ್ಞರು ಹೇಳುವಂತೆ ನಾವು ಊಟದ ಮಾಡಿದ ತಕ್ಷಣ ಈ ರೀತಿಯ ತಂಪು ಪಾನೀಯಗಳನ್ನು ಸೇವಿಸುವುದರಿಂದ ನಮ್ಮ ಜೀರ್ಣ ಕ್ರಿಯೆಯು ಸರಿಯಾಗಿ ಆಗದೆ ದೇಹದಲ್ಲಿ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ನಮ್ಮ ಜೀರ್ಣಕ್ರಿಯೆಯು ಸುಲಭವಾಗಲು ನಾವು ಊಟದ ನಂತರ ಪಾನೀಯವನ್ನು ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಸಾಮಾನ್ಯವಾಗಿ ಈ ತಂಪು ಪಾನೀಯಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶಗಳಿಂದ ಕೂಡಿರುತ್ತದೆ. ಅಲ್ಲದೆ ಮಸಾಲೆಯುಕ್ತ ಬಿರಿಯಾನಿ ಆಸಿಡಿಕ್ ಆಗಿರುವುದರಿಂದ ಇವುಗಳನ್ನು ಜೊತೆಯಾಗಿ ಸೇವಿಸುವುದು ನಮ್ಮ ದೇಹದಲ್ಲಿ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ತಜ್ಞರು ಈ ಕೆಳಗಿನ ಕೆಲವು ಪಾನೀಯಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ.

 

Healthy drinks after heavy meals:

 

1. ಪುದೀನಾ ನಿಂಬೆ ರಸ (Mint Lemonade):

ಇದು ಪುದೀನಾ ಎಲೆಗಳು, ಸಕ್ಕರೆ, ನೀರು ಮತ್ತು ತಾಜಾ ನಿಂಬೆ ರಸವನ್ನು ಮಿಶ್ರಣದಿಂದ ತಯಾರಿಸಿದ ಪಾನೀಯವಾಗಿದೆ. ಪುದೀನಾ ಹಾಗೂ ನಿಂಬೆ ರಸವು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ನಿಮ್ಮ ಹೊಟ್ಟೆಯನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ.
ಈ ಪಾನೀಯ ಬೇಸಿಗೆ ತಿಂಗಳುಗಳಲ್ಲಿ, ಕೆಫೆಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಹಾಗೂ ಮನೆಯಲ್ಲಿಯೂ ಜನಪ್ರಿಯವಾಗಿದ್ದು, ಬಿರಿಯಾನಿಯ ರುಚಿಯನ್ನು ಶ್ರೀಮಂತವಾಗಿ ಅನುಭವಿಸಲು ಸಹಾಯ ಮಾಡುತ್ತದೆ.

Mint Lemonade

 

2. ಮಜ್ಜಿಗೆ(Butter milk):

ಸಾಮಾನ್ಯವಾಗಿ ಚಾಸ್ ಎಂದು ಕರೆಯಲ್ಪಡುವ ಮಜ್ಜಿಗೆ, ಕರಗಿದ ಬೆಣ್ಣೆಯನ್ನು ನೀರಿನೊಂದಿಗೆ ಬೆರೆಸಿ ತಯಾರಿಸಿದ ಸಾಂಪ್ರದಾಯಿಕ ಭಾರತೀಯ ಪಾನೀಯವಾಗಿದೆ. ಈ ಪಾನೀಯವನ್ನು ಸಾಮಾನ್ಯವಾಗಿ ಶುಂಠಿ, ಹಸಿರು ಮೆಣಸು ಹಾಕಿ ತಯಾರಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಬಹಳ ಸಹಕಾರಿಯಾಗಿದ್ದು, ನಮ್ಮ ಭಾರತದಲ್ಲಿ ಒಂದು ಜನಪ್ರಿಯ ಪಾನಿಯವಾಗಿದೆ.

Butter milk

 

3. ಫ್ರೂಟ್ ಜ್ಯೂಸ್:

ಬಿರಿಯಾನಿಯಂತಹ ಭಾರೀ ಊಟದ ನಂತರ ಆಪಲ್,ಪೇರಳೆ, ಮತ್ತು ದಾಳಿಂಬೆಯಂತಹ ತಾಜಾ ಹಣ್ಣಿನ ರಸವನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯು ತುಂಬಾ ಸುಲಭವಾಗಿ ನಡೆಯುತ್ತದೆ.

fruit juice

 

4. ಟೆಂಡರ್ coconut:

ಇದನ್ನು ಸಾಮಾನ್ಯವಾಗಿ ಎಳೆನೀರು ಅಥವಾ ಎಲಾನಿರ್ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಭಾರತದ ಜನಪ್ರಿಯ ಪಾನಿಯವಾಗಿದೆ. ಇದರ ಸೇವನೆಯು ನಮ್ಮ ದೇಹವನ್ನು ನಿಧಾನವಾಗಿ ಹೈಡ್ರೇಟ್ ಮಾಡುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುವುದರಿಂದ ಭಾರಿ ಊಟದ ನಂತರ ಎಳೆನೀರಿನ ಸೇವನೆ ಒಂದು ಉತ್ತಮ ಆಯ್ಕೆಯಾಗಿದೆ.

tender coconut

5. ನನ್ನಾರಿ ಶರಬತ್:

ಇದನ್ನು ಸಾಮಾನ್ಯವಾಗಿ “ಭಾರತೀಯ ಸರಸ್ಪರಿಲ್ಲಾ” ಎಂದೂ ಕರೆಯಲಾಗುತ್ತದೆ. ಇದು ನನ್ನಾರಿ ಮರದ ತೊಗಟೆಯಿಂದ ತಯಾರಿಸಿದ ತಾಜಾ ಮತ್ತು ಸಿಹಿಯಾದ ಪಾನೀಯವಾಗಿದೆ. ಇದರ ಬೇರುಗಳನ್ನು ನೀರಿನಲ್ಲಿ ನೆನೆಸಿ ನಂತರ ಆ ನೀರಿಗೆ ಸಕ್ಕರೆ, ನಿಂಬೆ ರಸ ಅಥವಾ ಗುಲಾಬಿ ನೀರನ್ನು ಸೇರಿಸಿ ಈ ಪಾನೀಯವನ್ನು ತಯಾರಿಸಲಾಗುತ್ತದೆ.
ಇದು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಬೇಸಿಗೆಯಲ್ಲಿ ಜನಪ್ರಿಯವಾಗಿದ್ದು, ರೆಸ್ಟೋರೆಂಟ್‌ಗಳು ಮತ್ತು ಜ್ಯೂಸ್ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ.

nannari

ಪಾನೀಯದ ಹೆಸರು ವಿವರಣೆ
ಪುದೀನಾ ನಿಂಬೆ ರಸ (Mint Lemonade) ಪುದೀನಾ ಎಲೆಗಳು, ಸಕ್ಕರೆ, ನೀರು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ತಯಾರಿಸಿದ ತಾಜಾ ಪಾನೀಯ. ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುವುದು ಮತ್ತು ಹೊಟ್ಟೆ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಬಿರಿಯಾನಿಯಂತಹ ಭಾರೀ ಊಟದ ನಂತರ ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮಜ್ಜಿಗೆ (Buttermilk) ಕರಗಿದ ಬೆಣ್ಣೆಯನ್ನು ನೀರಿನೊಂದಿಗೆ ಬೆರೆಸಿ ತಯಾರಿಸಿದ ಸಾಂಪ್ರದಾಯಿಕ ಪಾನೀಯ. ಹಸಿರು ಮೆಣಸು ಮತ್ತು ಶುಂಠಿ ಸೇರಿಸಿ ತಯಾರಿಸಬಹುದು. ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ.
ಫ್ರೂಟ್ ಜ್ಯೂಸ್ (Fruit Juice) ಭಾರೀ ಊಟದ ನಂತರ ಆಪಲ್, ಪೇರಳೆ, ದಾಳಿಂಬೆ ಹಣ್ಣಿನ ತಾಜಾ ರಸ ಸೇವನೆ ಜೀರ್ಣಕ್ರಿಯೆಗೆ ಸಹಕಾರಿ.
ಎಳೆನೀರು (Tender Coconut) ದಕ್ಷಿಣ ಭಾರತದ ಜನಪ್ರಿಯ ಪಾನೀಯ. ಇದು ದೇಹವನ್ನು ಹೈಡ್ರೇಟ್ ಮಾಡುತ್ತಿದ್ದು, ಭಾರೀ ಊಟದ ನಂತರ ತಾಜಾಗಿ ಮಾಡುವ ಉತ್ತಮ ಆಯ್ಕೆಯಾಗಿದೆ.
ನನ್ನಾರಿ ಶರ್ಬತ್ (Nannari Sherbet) ನನ್ನಾರಿ ಮರದ ತೊಗಟೆಯಿಂದ ತಯಾರಿಸಿದ ಸಿಹಿ ಪಾನೀಯ. ಸಕ್ಕರೆ, ನಿಂಬೆ ರಸ ಅಥವಾ ಗುಲಾಬಿ ನೀರು ಸೇರಿಸಿ ತಯಾರಿಸಲಾಗುತ್ತದೆ. ಇದು ದಕ್ಷಿಣ ಭಾರತೀಯ ಬೇಸಿಗೆ ತಿಂಗಳಲ್ಲಿ ಜನಪ್ರಿಯ ಪಾನೀಯವಾಗಿದೆ.

 

 

 

ಇದನ್ನೂ ಓದಿ :

Blood Cancer : ವಿಧಗಳು, ಲಕ್ಷಣಗಳು ಹಾಗೂ ಕಾರಣಗಳು – Vicharavani Kannada

Gastric Problem: ಕಾರಣಗಳು, ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ-1 Ultimate Guide – Vicharavani Kannada

 

 

Do Follow

https://www.facebook.com/Vicharavani

https://x.com/Vicharavani

Leave a Reply

Your email address will not be published. Required fields are marked *