ಬೆಂಗಳೂರು: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ವಿಪ್ರೋ “ಸಂತೂರ್ ಮಹಿಳಾ ವಿದ್ಯಾರ್ಥಿ ವೇತನ” (Santoor Scholarship) ನೀಡುತ್ತಿದೆ. ಈ ವರ್ಷದ ಸಂತೂರ್ ವಿದ್ಯಾರ್ಥಿ ವೇತನ (Santoor Scholarship 2024)ಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ವ್ಯಾಸಂಗದಲ್ಲಿ ಉತ್ತಮ ಸಾಧನೆ ಮಾಡಿದ ಬಡ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 24,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಕಳೆದ ಎಂಟು ವರ್ಷಗಳಲ್ಲಿ, ಸುಮಾರು 8000 ವಿದ್ಯಾರ್ಥಿಗಳಿಗೆ ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ ಸಹಾಯ ದೊರಕಿದೆ. ಈಗ ಈ ಕಾರ್ಯಕ್ರಮದ ಒಂಬತ್ತನೇ ಆವೃತ್ತಿಯನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ತಮ್ಮ ಪದವಿ ಕೋರ್ಸ್‌ಗಳನ್ನು ಪೂರ್ಣಗೊಳಿಸುವವರೆಗೆ ಆರ್ಥಿಕ ಬೆಂಬಲ ನೀಡಲಾಗುತ್ತದೆ. ಆಂಧ್ರ ಪ್ರದೇಶ, ಛತ್ತೀಸ್‌ಗಢ, ಕರ್ನಾಟಕ ಮತ್ತು ತೆಲಂಗಾಣದ ಮಹಿಳಾ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪ್ರತಿವರ್ಷ, ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ವಿಪ್ರೋ ಕೇರ್‌ಗಳು ಬಡ ವಿದ್ಯಾರ್ಥಿನಿಯರ ಶಿಕ್ಷಣವನ್ನು ಉತ್ತೇಜಿಸಲು ಈ ವಿದ್ಯಾರ್ಥಿವೇತನವನ್ನು ನೀಡುತ್ತಿವೆ. ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿನಿಯರು ಹೊರತಾಗಿಯೂ, ಹ್ಯುಮನಿಟೀಸ್, ಕಲೆ ಮತ್ತು ವಿಜ್ಞಾನ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹುಡುಗಿಯರು ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಇಂಟರ್ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ವರ್ಷ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಛತ್ತೀಸ್‌ಗಢ ರಾಜ್ಯಗಳ 1500 ಬಡ ವಿದ್ಯಾರ್ಥಿನಿಯರಿಗೆ ಈ ಸಹಾಯಧನ ನೀಡಲಾಗುತ್ತದೆ. ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳು ಸೆಪ್ಟೆಂಬರ್ 20 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳು
○ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
○2023-24 ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ ಅಥವಾ ಜೂನಿಯರ್ ಕಾಲೇಜಿನಲ್ಲಿ ಇಂಟರ್ ಕ್ಲಾಸ್ ಪಾಸ್ ಆಗಿರಬೇಕು.
○2024-25 ಶೈಕ್ಷಣಿಕ ವರ್ಷದಲ್ಲಿ ಪದವಿ ಕಾರ್ಯಕ್ರಮಕ್ಕೆ ದಾಖಲಾಗಿರಬೇಕು.
○ಗ್ರಾಜುಯೇಟ್ ಕೋರ್ಸ್ ಕನಿಷ್ಠ 3 ವರ್ಷಗಳ ಅವಧಿಯಲ್ಲಿರಬೇಕು. ಹ್ಯುಮ್ನಿಟೀಸ್, ಲಿಬರಲ್ ಆರ್ಟ್ಸ್, ಮತ್ತು ಸೈನ್ಸ್ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು:
○ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
○10 ನೇ ತರಗತಿ ಹಾಗೂ 12 ನೇ ಮಾರ್ಕ್ಸ್ ಕಾರ್ಡ್
○ಗುರುತಿನ ಚೀಟಿ (ಆಧಾರ್ ಕಾರ್ಡ್, ಪಡಿತರ ಚೀಟಿ, ಇತ್ಯಾದಿ)
○ಬ್ಯಾಂಕ್ passbook copy (ಗ್ರಾಮೀಣ ಬ್ಯಾಂಕ್ ಹೊರತುಪಡಿಸಿ)
ಆಯ್ಕೆಯಾದ ವಿದ್ಯಾರ್ಥಿಗಳಿಗೆ, ತಿಂಗಳಿಗೆ 2,000 ರೂಪಾಯಿಯಾಗಿ ಮೂರು ವರ್ಷಗಳ ಕಾಲ ಅಥವಾ ಅವರ ಕೋರ್ಸ್ ಮುಗಿಯುವವರೆಗೆ ವರ್ಷಕ್ಕೆ 24,000 ರೂಪಾಯಿಯಷ್ಟು ವಿದ್ಯಾರ್ಥಿ ವೇತನ ದೊರಕಲಿದೆ. ಈ ಮೊತ್ತವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ವಿದ್ಯಾರ್ಥಿವೇತನ ಅರ್ಜಿಯ ಸೆಪ್ಟೆಂಬರ್ 20 ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸವ ವಿಧಾನ:
○ ಸಂತೂರ್ ಸ್ಕಾಲರ್‌ಶಿಪ್ ವೆಬ್‌ಸೈಟ್ (www.santoorscholarships.com) ಗೆ ಭೇಟಿ ನೀಡಿ.
○ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ‘Apply Online Now‘ ಬಟನ್ ಕ್ಲಿಕ್ ಮಾಡಿ.
○ ತೆರೆದು ಪುಟದಲ್ಲಿ ‘Apply Now‘ ಆಯ್ಕೆಯನ್ನು ಕ್ಲಿಕ್ ಮಾಡಿ.
○ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನಮೂದಿಸಿ, ರಿಜಿಸ್ಟರ್ ಮಾಡಿ ಮತ್ತು ಲಾಗಿನ್ ಐಡಿ ಪಡೆಯಿರಿ.
○ನಿಮ್ಮ ಲಾಗಿನ್ ಐಡಿ ಬಳಸಿಕೊಂಡು buddy4study ಖಾತೆಯಲ್ಲಿ ಲಾಗಿನ್ ಆಗಿ.
○ ಅಲ್ಲಿ ಸಂತೂರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ಅರ್ಜಿಯ ಪುಟ ತೆರೆಸಲಿದೆ.
○ಅರ್ಜಿಯನ್ನು ಭರ್ತಿಮಾಡಲು, ‘Application Start’ ಬಟನ್ ಕ್ಲಿಕ್ ಮಾಡಬೇಕು.
○ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸಲ್ಲಿಸಿ ಮತ್ತು ವಿದ್ಯಾರ್ಥಿನಿಯ ಅರ್ಜಿಯನ್ನು ಭರ್ತಿಮಾಡಿ.
○ಸಂಬಂಧಿತ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.
○ನಿಬಂಧನೆಗಳು ಮತ್ತು ಷರತ್ತುಗಳನ್ನು ಒಪ್ಪಿಗೆಯಾದ ನಂತರ, ಪ್ರಿವ್ಯೂ ಕ್ಲಿಕ್ ಮಾಡಿ.
○ಪ್ರಿವ್ಯೂನಲ್ಲಿ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ, ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಇದರಿಂದ ನಿಮ್ಮ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆಯಾಗಿದೆ.