Site icon Vicharavani Kannada

Carnivorous Plants (ಕೊಲೆಗಟುಕ ಮಾಂಸಾಹಾರಿ ಗಿಡಗಳು): ಹೇಗೆ ಪ್ರಾಣಿ ಪಕ್ಷಿಗಳನ್ನೇ ತಿನ್ನುತ್ತದೆ ?

Carnivorous Plants ಎಂದರೇನು ?

ಈ ಜಗತ್ತಿನಲ್ಲಿ ಮರ, ಗಿಡ,ಸಸ್ಯಗಳನ್ನ, ತಿನ್ನುತ್ತಾ ಜೀವನ ನಡೆಸುವ ಪ್ರಾಣಿ, ಪಕ್ಷಿಗಳು, ಹುಳಗಳು,ಕ್ರಿಮಿ ಕೀಟಗಳನ್ನ ನೋಡಿಯೇ ಇರ್ತೀರಾ. ಆದರೆ ಈ ಜಗತ್ತಿನಲ್ಲಿ ಪ್ರಾಣಿ ಪಕ್ಷಿ ಕಿಟಗಳನ್ನೇ ಆಹಾರವಾಗಿಸುಕೊಳ್ಳುವ ಪ್ರಾಣಿ ಪಕ್ಷಿ ಹುಳ ಕೀಟಗಳನ್ನ ಬೇಟೆಯಾಡಿ ಬದುಕುವ ಸಸ್ಯಗಳು ಇದಾವೆ ಅನ್ನುವುದರ ಕುರಿತಾಗಿ ಕೇಳಿದ್ದುಂಟೇ? ಹೌದು ಸ್ನೇಹಿತರೆ ಈ ಜಗತ್ತಿನಲ್ಲಿ ಕೇವಲ ಮಾಂಸಾಹಾರವನ್ನೇ ಅವಲಂಬಿಸಿ ತಿಂದು ಬದುಕುವ 600 ಕ್ಕೂ ಹೆಚ್ಚು ಸಸ್ಯಗಳ ತಳಿಗಳು ಇರುವುದಾಗಿರುತ್ತದೆ. ತಮ್ಮ ಆಹಾರಕ್ಕಾಗಿ ಬೇಟೆಗೆ ಕಾದು ಕುಳಿತುಕೊಳ್ಳುವ ಈ ಸಸ್ಯಗಳು ಅವುಗಳ ಬಳಿ ಬರುವ ಜೀವಿಗಳ ಮೇಲೆ ದಾಳಿ ನಡೆಸಿ ಬದುಕುವ ಸಸ್ಯಗಳಾಗಿರುತ್ತದೆ. ಅವುಗಳಲ್ಲಿ ಮುಖ್ಯವಾದ ಕೆಲವು ಮಾಂಸಾಹಾರಿ ಸಸ್ಯಗಳ ಕುರಿತಾದ ಒಂದಷ್ಟು ಮಾಹಿತಿಗಳನ್ನ ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನ .

 

 

1. ವೀನಸ್ ಫ್ಲೈ ಟ್ರ್ಯಾಪ್(Venus flytrap)

 

– ಅಮೇರಿಕದ ಕ್ಯಾಲಿಫೋರ್ನಿಯದ ತೇವಾಂಶ ಹೊಂದಿರುವ ಪ್ರದೇಶಗಳಲ್ಲಿ ಕಾಣ ಸಿಗುವ ಈ ಸಸ್ಯಗಳು ಸಣ್ಣ ಪುಟ್ಟ ಕೀಟಗಳು,ಹುಳಗಳು ಅಲ್ಲದೆ ಸಣ್ಣ ಪುಟ್ಟ ಕಪ್ಪೆ ಮರಿಗಳು, ಸಣ್ಣಪುಟ್ಟ ಪಕ್ಷಿಗಳನ್ನೂ ಸೇರಿಸಿ ತನ್ನ ಬಲೆಯೊಳಗೆ ಬೀಳಿಸಿ ಭಕ್ಷಿಸಿ ಬದುಕಲು ತನ್ನ ಪ್ರತ್ಯೇಕ ತರವಾದ ಎಲೆಗಳನ್ನ ತೆರೆದು ಕಾದು ಕುಳಿತುಕೊಳ್ಳುವುದಾಗಿರುತ್ತದೆ. ಹುಳ ಕೀಟಗಳನ್ನ ಆಕರ್ಷಿಸುವ ರೀತಿಯ ವಾಸನೆ ಹಾಗೂ ಸಿಹಿಯುಕ್ತ ಪದಾರ್ಥವನ್ನ ಹೊಂದಿರುವ ಈ ಗಿಡದ ಎಲೆಗಳ ಮಧ್ಯ ಪ್ರವೇಶಿಸುವ ಜೀವಿಗಳು ಎಲೆಯ ಮದ್ಯದಲ್ಲಿರುವ ಟ್ರಿಗರ್ ಹೇರ್ ಗಳನ್ನ ಮುಟ್ಟುತ್ತಲೇ ಪ್ರಚೋದನೆಗೊಂಡು ತಕ್ಷಣ ಆ ಎಲೆಗಳು ಮುಚ್ಚಿಕೊಳ್ಳುತ್ತದೆ . ಒಂದು ಭಾರಿ ಆ ಜೀವಿಗಳನ್ನ ಕೈದಿಯಾಗಿಸಿ ಈ ಎಲೆಗಳು ಕ್ಲೋಸ್ ಆಗಿಬಿಟ್ಟರೆ ನಂತರದಲ್ಲಿ ತೆರೆದುಕೊಳ್ಳುವುದು ಆ ಜೀವಿಯನ್ನ ಆಹಾರವಾಗಿಸಿ ಭಕ್ಷಿಸಿ ಮುಗಿಸಿದ ನಂತರದಲ್ಲೇ ಆಗಿರುತ್ತದೆ. ಈ ಅಪಾಯಕಾರಿ ಶಿಕಾರಿ ಬಲೆಗೆ ಬಿದ್ದ ಜೀವಿಗಳು ಒದ್ದಾಡುವುದಕ್ಕೂ ಕಷ್ಟ ಪಡುತ್ತಾ ಪ್ರಾಣವನ್ನೇ ಅರ್ಪಿಸಿ ಅತ್ಯಂತ ಹೀನಾಯವಾಗಿ ತಮ್ಮ ಆಟವನ್ನೇ ಮುಗಿಸಿಬಿಡುವುದಾಗಿರುತ್ತದೆ.

 

2 . ಸನ್ ಡಿವ್ ಪ್ಲಾಂಟ್(sun Dew Plant )

 

ಅತ್ಯಂತ ಸುಂದರವಾಗಿ ಕಾಣ ಸಿಗುವ ಈ ಗಿಡಗಳು ಎಷ್ಟು ಸುಂದರವಾಗಿ ಇರುತ್ತದೋ ಅದಕ್ಕಿಂತ ಹೆಚ್ಚು ಅಕ್ರಮಣಕರಿಯೂ ಆಗಿರುತ್ತದೆ. ಕ್ರಿಮಿ ಕೀಟಗಳು ಹಾಗೂ ಸಣ್ಣ ಪುಟ್ಟ ಜೀವಿಗಳಿಗೆ ಉತ್ತಮವಾದ ಸುವಾಸನೆಯನ್ನೂ ಹೊರ ಸೂಸುತ್ತ ತನ್ನತ್ತ ಅಕರ್ಶಿಸುವ ಜೊತೆಜೊತೆಗೆ ತನ್ನ ರೋಲರ್ ಕೂಂಬ್ ರೀತಿಯ ಆಕಾರದ ಅಂಚಿನಲ್ಲಿ ಅಂಟು ಪದಾರ್ಥಗಳಿಂದಲೇ ಕೂಡಿದ ವರ್ಣ ಗ್ರಂಥಿಗಳನ್ನ ಈ ಸಸ್ಯಗಳು ಹೊಂದಿಕೊಂಡಿರುವುದಾಗಿರುತ್ತದೆ. ಈ ಅಂಟು ಪದಾರ್ಥದ ಹನಿಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗಲೆಲ್ಲಾ ಅತ್ಯಾಕರ್ಷವಾಗಿ ಮಿನುಗುತ್ತಾ ಜೀವಿಗಳನ್ನ ಅಕರ್ಶಿಸುವ ಈ ಸನ್ ಡಿವ್ ಅನ್ನುವ ಸಸ್ಯವು ಆಹಾರವನ್ನ ಅರಸಿ ಬರುವ ಜೀವಿಗಳಿಗೆ ಮಕರಂದದ ರೀತಿಯಲ್ಲಿ ತೋರ್ ಪಡಿಸಿ ತನ್ನ ಬಲೆಗೆ ಬೀಳಿಸಿ ಅವುಗಳನ್ನೇ ತನ್ನ ಆಹಾರವಾಗಿ ಬಳಸಿಕೊಳ್ಳುವ ಅಪಾಯಕಾರಿ ಗಿಡವಾಗಿರುತ್ತದೆ . ಒಂದು ಭಾರಿ ಈ ಗಿಡದ ಮೇಲೆ ಕುಳಿತುಕೊಂಡ ಜೀವಿಗಳನ್ನ ತನ್ನ ಅಂಟು ಪದಾರ್ಥಗಳಿಂದ ಅಂಟಿಸಿಕೊಳ್ಳುವಂತೆ ಮಾಡಿಸಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿರುವಾಗಲೇ ಸುರುಳಿ ಆಕಾರದಲ್ಲಿ ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸಿ ಅದನ್ನ ಜಿರ್ಣಿಸಿಕೊಂಡು ಬದುಕು ಸಾಗಿಸುವುದಾಗಿರುತ್ತದೆ

3 . ಪಿಟ್ಚೆರ್ ಪ್ಲಾಂಟ್(Pitcher Plant )

 

ಅತೀ ಹೆಚ್ಚು ಸಣ್ಣಪುಟ್ಟ ಜೀವಿಗಳನ್ನ ಹಾಗೂ ಸ್ವಲ್ಪ ಗಾತ್ರದಲ್ಲಿ ದೊಡ್ಡದೇ ಆಗಿರುವ ಜೀವಿಗಳನ್ನೂ ಬೇಟೆಯಾಡುವುದರಲ್ಲಿ ಈ ಗಿಡವು ಇನ್ನಿತರ ಮಾಂಸಾಹಾರಿ ಗಿಡಗಳಿಗಿಂತ ಒಂದು ಪಟ್ಟು ಮೇಲುಗೈ ಸಾಧಿಸಿ ಬಿಟ್ಟಿರುತ್ತದೆ ಅಂತ ಅಂದರೂ ತಪ್ಪಾಗಲಾರದು. ಸುವಾಸನೆಯನ್ನ ಹೊರ ಸೂಸುವ ಈ ಕೊಳವೆ ಆಕಾರದ ಈ ಗಿಡದಲ್ಲಿ ಅಂಟಿನಿಂದಲೇ ಕುಡಿರುವ ಸಿಹಿಯಾದ ದ್ರವವನ್ನೂ ಕೂಡ ಕೊಳವೆ ತುಂಬಾ ತುಂಬಿಕೊಂಡಿದ್ದು ಇದನ್ನ ಕುಡಿಯಲೆಂದೇ ಈ ಗಿಡದ ಕೊಳವೆಯ ರಂದ್ರದ ಒಳಗಡೆ ನುಗ್ಗುವ ಇರುವೆಗಳು, ಕ್ರಿಮಿ ಕೀಟಗಳು, ಕಪ್ಪೆಗಳು,ಅಷ್ಟೇ ಯಾಕೆ ಇಲಿಗಳು, ಹಾವುಗಳು, ಅಳಿಲುಗಳು, ಕೋತಿ ಮರಿಗಳು ಈ ಗಿಡದ ರಂದ್ರದ ಒಳಗಡೆ ಅಡಗಿರುವ ಅಂಟು ಪದಾರ್ಥದಲ್ಲಿ ಅಂಟಿಕೊಂಡು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕಷ್ಟ ಪಡುವಂತೆ ಮಾಡಿಸಿ ತನ್ನ ಕೊಳವೆಯಂತಿರುವ ರಂದ್ರದ ಮುಚ್ಚಳವನ್ನ ಮುಚ್ಚಿಬಿಡುವುದಾಗಿರುತ್ತದೆ ಮುಂದೆ ಆ ಜೀವಿಗಳು ತಮ್ಮನ್ನ ರಕ್ಷಿಸಿಕೊಳ್ಳಲು ಸೋತು ಹೋಗಿ ಅನ್ಯ ದಾರಿ ಕಾಣದೆ ತಮ್ಮನ್ನ ಪೀಚರ್ ಪ್ಲಾಂಟ್ ಗೆ ಆಹಾರವಾಗಿ ಅರ್ಪಿಸಿ ಬಲಿಯಾಗಿಬಿಡುವುದಾಗಿರುತ್ತದೆ.

4 . ಕೋಬ್ರಾ ಲಿಲ್ಲಿ(Cobra Lilly )

 

ನೋಡಲು ನಾಗರಹಾವಿನ ಹೆಡೆಯಂತೆ ಕಾಣುವುದರಿಂದಲೇ ಕೋಬ್ರಾ ಲಿಲ್ಲಿ ಅನ್ನುವ ಹೆಸರನ್ನ ತನ್ನದಾಗಿಸಿಕೊಂಡಿರುವ ಈ ಸಸ್ಯವು ತನ್ನ ಹೆಡೆ ಆಕಾರದ ಕೇಳಬಾಗದಲ್ಲಿರುವ ಎಲೆಗಳ ಮೇಲೆ ಕುಳಿತು ಮಕರಂದಗಳನ್ನ ಹೀರಲು ಬರುವ ಕೀಟಗಳನ್ನ ತನ್ನ ಬಲೆಯೊಳಗೆ ಬಿಳಿಸಲೆಂದೇ ಅತ್ಯದ್ಭುತವಾಗಿ ವಿನ್ಯಾಸಗೊಂಡಿರುವುದಾಗಿರುತ್ತದೆ. ಎಲೆಗಳ ಮೇಲೆ ಕುಳಿತ ಜೀವಿಗಳು ಅಪ್ಪಿ ತಪ್ಪಿ ತಮಗರಿವಿಲ್ಲದೆ ಈ ಸಸ್ಯದ ಕೊಳವೆಯ ಒಳ ಪ್ರವೇಶಿಸಲ್ಪಟ್ಟರೆ ಅಕ್ಷರಸಹ ನರಕ ದರ್ಶನವನ್ನೇ ಪಡೆದು ಬಿಡುವುದಾಗಿರುತ್ತದೆ. ಒಳ ಹೊಕ್ಕ ಜೀವಿಗಳು ಹೊರಬರಲು ದಾರಿಯ ಹುಡುಕಾಟದಲ್ಲಿ ತೊಡಗಿಕೊಂಳ್ಳುವಾಗ ಕನ್ಫ್ಯೂಸ್ ಮಾಡಿಸುವ ರೀತಿಯಲ್ಲಿ ಅವುಗಳಿಗೆ ಟ್ರಾನ್ಸಫರೆಂಟ್ ಕಿಟಕಿಗಳ ರೀತಿಯಲ್ಲಿ ನಿಜವಾದ ರಂದ್ರಗಳಂತೆ ಬಾಸವಾಗಿಸಿ ಸಾಯುವವರೆಗೂ ದಾರಿಯ ಹುಡುಕಾಟದ ಪ್ರಯತ್ನದಲ್ಲೇ ಸುಸ್ತಾಗಿಸಿ ಶರಣಾಗಿಸುವಂತೆ ಮಾಡಿ ಬಲಿ ಪಡೆದು ಸತ್ತು ಬಿದ್ದವುಗಳನ್ನ ಪಚನವಾಗಿಸುವುದರ ಮೂಲಕ ತನಗೆ ಬೇಕಾದ ಆಹಾರವನ್ನ ಪಡೆದುಕೊಳ್ಳುವ ವಿದಾನವನ್ನ ಈ ಗಿಡವು ಬಳಸುವುದಾಗಿರುತ್ತದೆ.

 

ವಿವರವಾಗಿ ಪ್ರಕ್ರಿಯೆಯನ್ನು ನೋಡಲು ಯೂಟ್ಯೂಬ್ ವಿಡಿಯೋ ನೋಡಿ

https://youtu.be/c68qKJ_O9do

Exit mobile version